ಬುಧವಾರ, ನವೆಂಬರ್ 6, 2019

ಬದಲಾವಣೆ

                    ( ಚಿತ್ರಕೃಪೆ : ಅಂತರ್ಜಾಲ)

'ಬದಲಾವಣೆ'ಯೇ, ನಿನಗೆಷ್ಟು ಸೊಕ್ಕು!
ನನ್ನೊಳು ಹೊಕ್ಕು, ನನ್ನನ್ಯಾಕೆ ನೀ ಬದಲಿಸುತ್ತಿಲ್ಲ?!

'ಬದಲಾವಣೆ'ಯೇ, ನೀ ಪ್ರಕೃತಿಯ ಸಹಜ ಧರ್ಮ!
ನಿನ್ನಯ ಪ್ರಕಾರ ಹಲವು! ಬಲ್ಲೆವು ನಿನ್ನೊಳವಿತಿರುವ ಪ್ರತಿ ನಿಲುವು!

'ಬದಲಾವಣೆ'ಯೇ, ನೀ ಸಾಗದ ದಾರಿಯಿಲ್ಲ!
ನೀ ಮುಟ್ಟದ ಕ್ಷೇತ್ರವಿಲ್ಲ! ನೀ ಬದಲಿಸಿದ ಬದಲಾವಣೆಗಳಿಲ್ಲ!!

'ಬದಲಾವಣೆ'ಯೇ, ನೀ ಮುನಿದರೆ ವಿಕೋಪ!
ಕುಣಿದರೆ ಪ್ರತಾಪ! ಆದ್ರೆ ಆ ನಿನ್ನ ರೂಪ ಬಲು ಅಪರೂಪ!

'ಬದಲಾವಣೆ'ಯೇ, ನಿನ್ನಿಂದಲೇ ಹೊಸ ಹುರುಪು!
ನಿನ್ನಿಂದಲೇ ಹೊಸ ಹರುಷ! ನೀ ಬಯಸಿದೊಡೆ ಬದಲಾಗದೇ ಈ ಬಾಳು?

'ಬದಲಾವಣೆ'ಯೇ, ನಿನ್ನಲ್ಲಿ ನನ್ನೀ ಕೋರಿಕೆ!
ನಮ್ಮನ್ನು ಬದಲಿಸುವ ನೀನು, ಎಂದಿಗೂ ಬದಲಾಗದಿರು!
ಪ್ರಕೃತಿಯ ಸಹಜ ನಿಯಮಗಳು ನಿನ್ನಿಂದ ಬೇರ್ಪಡದಿರಲಿ!
ಆರೋಗ್ಯಕರ ಬದಲಾವಣೆ ನಮ್ಮನ್ನಾವರಿಸಲಿ!!
ಬದುಕನ್ನು ಬದಲಿಸಲು ನೀ ಬಾ! ಬವಣೆಗಳ ನೀಗಿಸಲು ನೀ ಬಾ!!

                                                 -ಎಂ.ಕೆ.ಹರಕೆ

1 ಕಾಮೆಂಟ್‌:

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...