ಶನಿವಾರ, ಡಿಸೆಂಬರ್ 17, 2016

ಮನಸ್ಸಿನ ಮಾತು...!!!👇👇

                    ಇಂದು ಅದೇಕೋ  ತದೇಕ ಚಿತ್ತವಿಲ್ಲದೇ , ಅತ್ತಿತ್ತ ಸುತ್ತುತ್ತಿದ್ದ ಮನಸ್ಸನ್ನು ಹಿಡಿದಿಡಲು ಪರದಾಡುವಂತಾಗಿತ್ತು . ಕಾಲೇಜಿನಲ್ಲಿ ಇಂಟರ್ನಲ್ ಮುಗಿಸಿ ಹಾಗೆ ಜನಜಂಗುಳಿಗಳ ಮಧ್ಯೆ ನುಸುಳಿ ಬಂದು  BMTC BUSನಲ್ಲಿ ಒಂದು ಸೀಟನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೆ. ಅಂತೆಯೇ ನಿದ್ದೆಯ ಬಂಪರಿನೊಂದಿಗೆ ಮೊಬೈಲನ್ನು ಹೊರ ತೆಗೆದು ವಾಟ್ಸಾಪ್ನನಲ್ಲಿ ಏನನ್ನೋ ಒತ್ತುತ್ತ ಕುಳಿತಂತಿತ್ತು. ಹಾಗೇ 'sanchith' ಎಂಬ ಹೊಸ ಹೆಸರು contact list ನಲ್ಲಿ ಮಿನುಗುತ್ತಿತ್ತು. ನಾನು DP check ಮಾಡಿ ನೋಡಿದಾಗ ಎಲ್ಲೋ ಈತನ ಮುಖ ನೋಡಿದಂತೆ ಭಾಸವಾಗುತ್ತಿತ್ತು. ಹಾಗೆ ತಲೆಯಮೇಲೆ ಕೈ ಹೊತ್ತು ಒಂದೆರಡು ನಿಮಿಷಗಳ ಕಾಲ ಉಗುರು ಕಚ್ಚುತ್ತಾ ಯೋಚಿಸಿದೊಡನೇ ನೆನಪಾದಂತಾಯಿತು, ಹ್ಞಾ....  ಈತ ನನಗೆ agriculture practical exam(GKVK college) ಬರೆಯಲು ಹೋದಾಗ ಭೇಟಿಯಾಗಿದ್ದವನು ಅಂತ....
                       ಅಲ್ಲಿ ಅವನನ್ನು ಸಂಧಿಸಿ ಕಾಲಹರಣ ಮಾಡಿದ್ದು ಕೇವಲ ಎರಡರಿಂದ ಮೂರು ಗಂಟೆಗಳು ಮಾತ್ರ, ಆ ನಿಮಿಷಾವಧಿಗಳಲ್ಲೇ ಆತ ನನಗೆ ತುಂಬಾ ಹತ್ತಿರವಾದಂತೆ ಭಾಸವಾದನು. ಅವನೊಡನೆ ಗಾಂಧಿಪ್ರತಿಮೆ ಮುಂದೆ ಸೆಲ್ಫಿ ಕ್ಲಿಕ್ಕಿಸಿ, University campusನಲ್ಲಿ ಒಂದೂವರೆ ಕಿಮೀ ನಡೆದು ಬಂದು,ಬಸ್ ಹತ್ತಿ ಸಾಗಿದ ನೆನಪು...
                       ಅದೇಕೋ ಕಾಣೆ, ನಾನು ಯಾವುದೋ ಕ್ಷೇತ್ರಕ್ಕೇ ಹೋಗಬೇಕೆಂದು ಬಯಸಿ, ಅತ್ತ-ಇತ್ತ ಸುತ್ತಿ ಕಡೆಗೆ engg ಸೇರಿದಾತ. ಈಗಾಗಲೇ ಎಲ್ಲ ಕಡೆಗಳಲ್ಲೂ admission process ಮುಗಿದಿರುತ್ತದೆ, ಈತನೂ ಎಲ್ಲಾದರೂ ಸೇರಿರುತ್ತಾನೆಂದು ಭಾವಿಸಿ ಸುಮ್ಮನೆ, ಜಂಗಮವಾಣಿಯ ಮೇಲೆ ಆಂಗ್ಲ ಭಾಷೆಯಲ್ಲಿ hii ಎಂದು ಬರೆದು send ಬಟನ್ ಮೇಲೆ ಟ್ಯಾಪ್ ಮಾಡಿದೆ. ಅತ್ತ-ಕಡೆಯಿಂದ "who's this??" ಎಂದು ರೀಪ್ಲೇ ಬಂತು. "ಹೊಯ್ ನಾನು ನಿಂಗೆ ಅಗ್ರಿ ಕಾಲೇಜಿನಲ್ಲಿ ಸಿಕ್ಕಿದ್ನಲ್ಲ .." ಎಂದು ಪುನಃ ತಿರುಗಿ ಟೆಕ್ಸ್ಟ್ ಮಾಡಿದೆ. ಅವನು "ಸಾರಿ ಕಣೋ .. ಯಾರೋ ಗೊತ್ತಾಗ್ಲಿಲ್ಲ..." ಎಂದು ಕಳುಹಿಸಿದ. ಅದಕ್ಕೆ ನಾನು ನನ್ನ ಇತ್ತೀಚಿನ ಒಂದು ಫೋಟೊ ಕಳುಹಿಸಿದೆ..
                        ತಕ್ಷಣ ಆತ "ಓಹೋ,ನೀನು... ಹೇಳ್ ಮಗ ಹೇಗಿದ್ದೀಯಾ? ಏನು ಮಾಡ್ತಾ ಇದ್ದೀ ಈಗ?" ಎಂದು ಒಂದರ ಮೇಲೊಂದರಂತೆ reply ಮಾಡಿದ ... ನನಗೆ ಅವನು ನನ್ನನ್ನು ಗುರುತು ಹಿಡಿದನಲ್ಲ ಎಂದು ಸಮಾಧಾನ ಆಯಿತು. "ನಾನು ಬೆಂಗಳೂರಿನಲ್ಲಿ engg ಸೇರಿದ್ದೀನಿ ಕಣೋ.. ನೀನು? ಎಲ್ಲೀದ್ದೀಯಾ?,ಯಾವ್ ಕಾಲೇಜು join ಆದೆ!!?" ಎಂದು ಕೇಳಿದೆ..
                        ಮಗ ನಾನು ಬೆಂಗ್ಳೂರಲ್ಲೇ ಇದ್ದೀನಿ... ಆದರೆ ಕಾಲೇಜ್ ಸೇರಿಲ್ಲ ಕಣೋ.. ಎಂದನು. ಯಾಕೋ ಇಯರ್ ಗ್ಯಾಪ್ ಮಾಡಿ ಮೆಡಿಕಲ್ ಮಾಡ್ತೀಯಾ?? ಎಂದು ಪ್ರಶ್ನಿಸಿದೆ. ಅದಕ್ಕವನು ಇಲ್ಲಮಗ ಹಂಗೇನಿಲ್ಲ.... ಎಂದು ನಿಶ್ಶಕ್ತನಂತೆ ಉತ್ತರಿಸಿದ.  ಅವನು ಏನೋ ದೀರ್ಘ ಸಮಯ ಟೈಪ್ ಮಾಡುತ್ತಿದ್ದಾನೆಂಬುದು ನನಗೆ ತಿಳಿಯಿತು..wait ಮಾಡಿ ನೋಡಿದೆ., ಆದರೂ ಇನ್ನೂ typing..........ಎಂದು ತೋರುತ್ತಲೇ ಇತ್ತು. ಅಂತೂ ಕಡೆಗೆ ಮೆಸೇಜ್ ಡಿಸ್ಪ್ಲೇ ಆಯಿತು. ಓದಲು ನನಗೆ ಕುತೂಹಲ‌‌, ಆದರೆ ಆತ " ಮಗ., ನನಗೆ ಬ್ಲಡ್ ಕ್ಯಾನ್ಸರ್ ಇದೆ ಕಣೋ.. ಲಾಸ್ಟ್ 6 months ಇಂದ ಟ್ರೀಟ್ಮೆಂಟ್ ತಗಳ್ತಿದ್ದೀನಿ, ಅದ್ಕೆ ನಾನು ಕಾಲೇಜ್ಗೆ ಸೇರಿಲ್ಲ." ಎಂದು ಉತ್ತರಿಸಿದ್ದ . ಅದೇಕೋ ನನಗೆ ಒಂದೇ ನಿಮಿಷದಲ್ಲಿ ಎದೆ ಒಡೆದುಹೋದಂತಾಯಿತು. ಕಣ್ಣು ಒಂದೇ ಕ್ಷಣದಲ್ಲಿ ಮುಚ್ಚಿ ತೆರದಂತಾಯಿತು. ಹೇ..ಬಸ್ನನಲ್ಲಿ ನಿದ್ರಿಸುತ್ತಾ ಕನಸು ಕಾಣುತ್ತಿರಬೇಕೇಂದು ಅಂದುಕೊಂಡೆ.... ಆದ್ರೆ ಮೊಬೈಲ್ನನಲ್ಲಿ ಟೆಕ್ಸ್ಟ್ ಕಾಣುತ್ತಿತ್ತು. ಅತ್ತ-ಇತ್ತ ಗಾಬರಿಯಿಂದ ನೋಡುತ್ತಲೇ ಇಳಿಯುವ ಸ್ಟಾಪ್ ಆಗಲೇ ಹೋಗಿತ್ತು. ಮುಂದಿನ stopನಲ್ಲಾದರೂ ಇಳಿಯಬೇಕೇಂದು ಜನರ ನಡುವೆ ನುಸುಳಿಕೊಂಡು, ಹಾಗೋ-ಹೀಗೋ ದಾರಿಮಾಡಿಕೊಂಡು ಕೆಳಗಿಳಿದೆ.                                                    
                                    ಯಾಕೋ ಮನದನಿದಂತಿತ್ತು., ನಾಲಿಗೆ ಒಣಗಿದಹಾಗೆ ಭಾಸವಾಗತೊಡಗಿತು.ಪ್ರಥಮ ಬಾರಿ ಒಂದು ರೀತಿಯ ಹೊಸ ಅನುಭವ.. ಅಷ್ಟರಲ್ಲಿ ಆತ ನೀನು ಯಾವ ಕಾಲೇಜ್ ಸೇರ್ದೇ??ಎಂದು question ಮಾಡಿ., ನಾನು ರೀಪ್ಲೇಮಾಡ್ದೆ ಸುಮ್ಮನಾಗಿದ್ದಕ್ಕೆ offline ಆಗಿದ್ದ. ನಾನು BMS collegeನಲ್ಲಿ civil engg ಮಾಡ್ತಿದ್ದೀನಿ ಕಣೋ.. ಎಂದು ಬೇಸರದಿಂದಲೇ ಟೈಪ್ಮಾಡ್ದೆ. ಅವನು ಸಂತಸದಿಂದ congrats ಮಗ.. good luck ಎಂದು ಹೇಳಿದ. ಆಗ ನಾನು ಯಾವ hospital ಎಂದು ಕೇಳಿದೆ. ಆತ ನಾರಾಯಣ health care ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀನಿ.,ಎಂದು ಹೇಳಿದ.. ನನಗೆ ಮುಂದೆ ಏನೂ ಮಾತನಾಡಲು ಆಗದೆ, kk bye take care of ur health ಎಂದು ಹೇಳಿ ಸುಮ್ಮನಾದೆ....                                                                                                          ಏನೋ ಮನಸ್ಸಿನಲ್ಲಿ ಕಸಿವಿಸಿ, ಕಣ್ಣಿನ ತುದಿಯಿಂದ ನೀರು ಜಿನುಗಿದ ಹಾಗೆ ಭಾವ. ಅಷ್ಟರಲ್ಲೇ ನಡೆಯುತ್ತಾ ಹಾಸ್ಟೆಲ್ ತಲುಪಿಯಾಗಿತ್ತು. ಮಧ್ಯಾಹ್ನದ ಊಟ ಮಾಡುವ ಗೋಜಿಗೆ ಹೋಗಲಿಲ್ಲ.ಹೋಗುವ ಮನಸ್ಸು ಬರಲಿಲ್ಲ.ಹಾಗೆ ಮೆಟ್ಟಿಲು ಏರಿ ರೂಮಿಗೆ ಬರುತ್ತಿರೇ, ದನಿವಾದಂತಾಗಿತ್ತು.ಎಲ್ರೂಗೂ ಎಕ್ಸಾಮ್ ಇದ್ದಿರ್ಬೇಕು,ಅದಕ್ಕೆ ಫಸ್ಟ್ ಟೈಮ್ ಎಲ್ಲರೂ ಕಾಲೇಜ್ಗ್  ಹೋಗಿದ್ದರು!
                                          ನಾನು ಈ ದೃಷ್ಟಾಂತದಿಂದ ನಿಮಗೆ ಹೇಳುವುದು ಇಷ್ಟೇ, ನಾವು ನಿರಂತರ ಜೀವನದ ಪಥದಲ್ಲಿ ಹಲವಾರು ಸಿಹಿ-ಕಹಿಗಳೊಂದಿಗೆ ಸಾಗುತ್ತೇವೆ. ಬದುಕು ನಮ್ಮನ್ನು ನಾನಾ ರೀತಿಯಲ್ಲಿ ಪರೀಕ್ಷಿಸುತ್ತದೆ.ನಾನಾ ಬಗೆಯ ಬದಲಾವಣೆ ನಮ್ಮನ್ನು ಪ್ರವೇಶಿಸುತ್ತವೆ.,ಆದರೆ ಅವುಗಳೆಲ್ಲಾ ಆರೋಗ್ಯಕರವಾಗಿರಬೇಕು. ಗುರಿಸಾಧನೆಗೆ ಆ ಎಲ್ಲ ಬದಲಾವಣೆ ಪುಷ್ಟಿ ನೀಡುವಂತಿರಬೇಕು. ನಾವೆಲ್ಲರೂ ನಮ್ಮ ನಮ್ಮ  ಕ್ಷೇತ್ರವನ್ನು ಪ್ರೀತಿಸಬೇಕು, ಪೂಜಿಸಿ ಗೌರವಿಸಬೇಕು.ಅಂದುಕೊಂಡಿದ್ದನ್ನು ಸಾಧಿಸಲು ಆಗುತ್ತಿಲ್ಲ ಎಂಬ ಕೊರಗು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಅದನ್ನು ಬಲವಂತವಾಗಿಯಾದರೂ ಬದಿಗೊತ್ತಿ, ನಮ್ಮನ್ನು ಮೀರಿದ ಪ್ರಯತ್ನ ನಮ್ಮದಾಗಬೇಕು...
                                   ಭಗವಂತ ನಮಗೇನನ್ನೂ ನೀಡಿಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ..ಏಕೆಂದರೆ ನಮಗಿಂತ ಕಷ್ಟದ ಜೀವನ ಸಾಗಿಸುವ ಸಾವಿರಾರು ಜನ ನಮ್ಮ ಸುತ್ತಮುತ್ತಲೇ ಇದ್ದಾರೆ..ಇದಕ್ಕೆ  ಸ್ಪಷ್ಟ ಉದಾಹರಣೆ ನನ್ನ ಸ್ನೇಹಿತನ ಅನಾರೋಗ್ಯ..  ಕೇವಲ ಎರಡೇ ಗಂಟೆಗಳಲ್ಲಿ ಪರಿಚಯವಾದವರು ಎಷ್ಟು ಬೇಗ ಮನಸ್ಸಿನ ಗೃಹಪ್ರವೇಶಿಸುತ್ತಾರೆ... ಅದೇನೋ ವಿಶೇಷತೆ ನಮ್ಮನ್ನು ಆವರಿಸುತ್ತದೆ.ಹೌದು ಸ್ನೇಹ, ಪ್ರೀತಿ,ವಾತ್ಸಲ್ಲ್ಯಗಳಿಗೆ ಹೆಚ್ಚಿನ ಸಮಯ ಬೇಕಾಗೋದಿಲ್ಲ.. ಜೀವನದ ಜಂಗಿಕುಸ್ತಿಯಲ್ಲಿ ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಕೈಹಿಡಿದು ನಡೆಸುವ ಶಕ್ತಿ ಇರೋದು ಅವುಗಳಿಗೆ ಮಾತ್ರ. ಛಲದಿಂದ ಮುನ್ನುಗ್ಗಿ, ಸಾಧನೆ ಎಂಬ ಕದನ ಗೆದ್ದು ತೀರುವ ತವಕ ನಿಮ್ಮಲ್ಲಿ ಸದಾ ಇರಲಿ.....     

                                          📝✳ ಎಂ.‌‌‌‌‍ಕೆ.ಹರಕೆ✴
                     

ಮೌನಜ್ವಾಲೆ

ಹಾಡು ಬರೆಯಬೇಕು ಅಳುವ ಮರೆಯಬೇಕು ಮಾತು ಮುಗಿದ ಮೇಲೆ ವಿರಹ ಮೌನಜ್ವಾಲೆ! ಯಾವ ಭೀತಿಯಲ್ಲಿ ಯಾರ ಪ್ರೀತಿಯಲ್ಲಿ ಏನೂ ಹೇಳಲಾರೆನು ಕೂಡಿ-ಕಳೆಯಲಾರೆನು! ಅಂದವಾದ ಮೈಸಿರಿ ಕಳೆದು...