ಸರ್ವರ ಕಷ್ಟವ ಅರಿತು ನೀ ನಡೆದರೆ
ನೀನಾಗುವೆ ನಿಜ ಹರಿಭಕುತ!
ಉಪಕಾರವೇ ಪರಕಷ್ಟಕೆ ಔಷಧಿ
ಮಾಡಿದೆ ಎನ್ನದಿರು ಮನದೊಳಗೆ!!
ಲೋಕದಿ ಸಕಲರೂ ವಂದನೆಗೊಳ್ಳಲಿ
ನಿಂದಿಸದಿರು ನೀ ಯಾರನ್ನೂ!
ತನು-ಮನ-ಕಾರ್ಯವು ಪರಿಶುದ್ಧಿಯಾದರೆ
ಧನ್ಯಾತಿ ಧನ್ಯಳು ನಿನ್ನ ಹೆತ್ತವಳು!!
ಸಮದೃಷ್ಟಿಯಲ್ಲಿ ಸರ್ವರೂ ನಿಲ್ಲಲಿ
ಪರಸ್ತ್ರೀ ಎಂದಿಗೂ ನಿನ್ನ ತಾಯಿ!
ನಾಲಗೆಯಿಂದ ನೀ ಅಸತ್ಯವ ನುಡಿಯದೇ
ಪರಸ್ವತ್ತಿಗೆ ಕೈ ಹಾಕದಿರು!!
'ಮೋಹ' ಎಂಬ ಮಾಯೆಗೆ ಬೀಳದೆ
ದೃಢವೈರಾಗ್ಯ ಇರಿಸು ಮನದೊಳಗೆ!
ರಾಮನಾಮ ಕೇಳಿ ಪುಳಕಿತ ನೀನಾದೊಡೆ
ಸಕಲ ತೀರ್ಥಂಗಳೂ ಎದೆಯೊಳಗೆ!!
ಜಿಪುಣಿಯಾಗದೆ ದುರಾಸೆಯ ಬಿಡುನೀ
ಕೋಪದ ಬಾವಿಗೆ ಬೀಳದಿರು!
ಕವಿ ನಿನ್ನಾ ರೂಪವ ಕಾಣಲು ಕಾಯ್ವನು
ಪುಣ್ಯದ ಪ್ರಾಪ್ತಿ ಅಂದು ಜಗಕ್ಕೆಲ್ಲಾ!!
~ ಗುಜರಾತಿ ಆದಿಕವಿ ನರಸಿಂಹ ಮೆಹ್ತಾ
(ಕನ್ನಡ ಅನುವಾದ : ಮಾಳಿಂಗರಾಯ ಹರಕೆ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ